ಭಗವಂತ ಕೈಕೊಟ್ಟ
ಮಣ್ಣಿನ ಮಗ ಪಿ. ಬಿ. ಶ್ರೀನಿವಾಸ್
ಗೀತಪ್ರಿಯಾ
ವಿಜಯ ಭಾಸ್ಕರ್
ಭಗವಂತ ಕೈಕೊಟ್ಟ ದುದಿಯೋಕಂತ
ಅದನ್ಯಾಕೆ ಎತ್ತುವೆ ಹೊಡಿಯೋಕಂತ || ಪ ||
ಮನಸ್ಸನ್ನ ಮನ್ಸ ಹೆದರ್ಸ್ತಿದ್ನಂತೆ ಆವತ್ತು
ಮನ್ಸನ್ನ ಮನ್ಸ ಹೆದರ್ಸ್ತಾನೆ ಈವತ್ತು
ಹೆದರೋರ್ನ ಕಂಡ್ರೆ ಹೆದರ್ಸ್ತೀಯಾ
ಮುಂದೆ ಇದ್ರೆ ಹೊಗಳ್ತಿಯಾ
ಹಿಂದೆ ಇದ್ರೆ ತೆಗಳ್ತಿಯಾ
ಒಂದೊಂದ್ ಚಣ ಒಂದೊಂದ್ ಬಣ್ಣ
ಓತಿಕ್ಯಾತ್ನಂತೆ ತೋರ್ತೀಯ
ಒಬ್ಬರ್ ಸೊತ್ನ ನುಂಗಾಕಿ
ಬಾಯಿಗ್ ಬಂದಂಗ್ ಬಯ್ತೀಯಾ
ಈಗ್ ನನ್ ಮಾತ್ ವಸಿ ಕೇಳ್ತಿಯಾ
ಭಗವಂತ ಬಾಯ್ ಕೊಟ್ಟ.. ಯಾಕೆ?
ಭಗವಂತ ಬಾಯ್ ಕೊಟ್ಟ ನುಡಿಯೋ ಕಂತ
ಅದನ್ಯಾಕೆ ತೆರೆಯುವೆ ಬಯ್ಯೊ ಕಂತ || ಪ ||
ಮಾಬಾರ್ತದ ಕಾಲ್ದಾಗೆ
ಒಬ್ಬ ಶಕುನಿ ಇದ್ನಂತೆ
ಈ ಕಾಲ್ದಾಗು ನಿನ್ನಂತ
ಏಟೋ ಶಕುನಿಗಳವರಂತೆ
ರಾಮಾಯಣದ ರಾವಣನ್ನ
ಕೊಲ್ಲೋಕ್ ಹುಟ್ದ ಶ್ರೀರಾಮ
ಮಾಬಾರ್ತದ ಕೀಚಕನ್ನ
ತದ್ಕೋಕ್ ಹುಟ್ದ ಬಲಭೀಮ
ಒಬ್ಬ ರಾವ್ಣಂಗ್ ಒಬ್ಬ ರಾಮ
ಒಬ್ಬ ಕೀಚಕಂಗ್ ಒಬ್ಬ ಭೀಮ
ನಿನ್ನಂತೋರ್ಗೆ ನನ್ನಂತ್ ಗಾಮಾ
ಭೂಮ್ಯಾಗ್ ಇರ್ತಾರಂತೆ
ಈ ಮಾತು ಒಸಿ ಕೇಳ್ತಿಯಾ
ಭಗವಂತ ಕಾಲ್ ಕೊಟ್ಟ ಯಾಕೆ
ಭಗವಂತ ಕಾಲ್ ಕೊಟ್ಟ ನಡೆಯೋಕಂತ
ಅದನ್ಯಾಕೆ ಎತ್ತುವೆ ಒದೆಯೋಕಂತ || ಪ ||
ಮಣ್ಣಿನ ಮಗ
ಚಿತ್ರ ನೋಡಿ